Firefox Lite ಗೌಪ್ಯತೆ ಪ್ರಕಟಣೆ

Mozilla ದಲ್ಲಿ, ಗೌಪ್ಯತೆಯು ಆರೋಗ್ಯಯುತ ಇಂಟರ್ನೆಟ್‌ಗೆ ಒಂದು ಮೂಲಭೂತ ಅಂಶವಾಗಿದೆ ಎಂದು ನಾವು ನಂಬುತ್ತೇವೆ.

ಇದಕ್ಕಾಗಿಯೇ ನಾವು Firefox Lite ಅನ್ನು ಮತ್ತು ನಮ್ಮ ಎಲ್ಲಾ ಉತ್ಪನ್ನಗಳನ್ನು ನೀವು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಮಾಹಿತಿಗೆ ನಿಮಗೆ ಉತ್ತಮ ನಿಯಂತ್ರಣವನ್ನು ನೀಡಲು ನಾವು ರಚಿಸಿದ್ದೇವೆ. ಎಲ್ಲರಿಗೂ Firefox Lite ಅನ್ನು ಸುಧಾರಿಸುವುದಕ್ಕಾಗಿ ನಮಗೆ ಅಗತ್ಯವಿರುವುದನ್ನು ಮಾತ್ರ ಸಂಗ್ರಹಿಸಲು ನಾವು ಶ್ರಮಿಸುತ್ತೇವೆ.

ಈ ಗೌಪ್ಯತೆ ಪ್ರಕಟಣೆಯಲ್ಲಿ, Firefox Lite ಯಾವ ಡೇಟಾವನ್ನು ಸ್ವೀಕರಿಸುತ್ತದೆ ಮತ್ತು ಹಂಚಿಕೊಳ್ಳುತ್ತದೆ ಎಂಬುದನ್ನು ನಾವು ವಿವರಿಸುತ್ತೇವೆ ಮತ್ತು ಈ ಹಂಚಿಕೆಯನ್ನು ನಿಯಂತ್ರಿಸಲು ನಿಮ್ಮನ್ನು ಸೆಟ್ಟಿಂಗ್‌ಗಳಿಗೆ ಸೂಚಿಸುತ್ತೇವೆ. Firefox Lite ನಿಂದ ನಾವು ಮಾಹಿತಿಯನ್ನು ಹೇಗೆ ಸ್ವೀಕರಿಸುತ್ತೇವೆ, ನಿರ್ವಹಿಸುತ್ತೇವೆ ಮತ್ತು ಹಂಚಿಕೊಳ್ಳುತ್ತೇವೆ ಎಂಬುದರ ಕುರಿತು Mozilla ಗೌಪ್ಯತೆ ನೀತಿಯಲ್ಲಿ ವಿವರಿಸಿರುವಂತೆ ನಾವು ನಡೆದುಕೊಳ್ಳುತ್ತೇವೆ.

Firefox Lite ಪೂರ್ವನಿಯೋಜಿತವಾಗಿ ಇದಕ್ಕಾಗಿ ಡೇಟಾವನ್ನು ಹಂಚಿಕೊಳ್ಳುತ್ತದೆ:

ಎಲ್ಲೆಡೆ ಬಳಕೆದಾರರಿಗೆ ಕಾರ್ಯಕ್ಷಮತೆ ಮತ್ತು ಸ್ಥಿರತೆಯ ಸುಧಾರಣೆ

  • ಸಂವಹನ ಡೇಟಾ: Firefox Lite ನೊಂದಿಗೆ ನಿಮ್ಮ ಸಂವಹನಗಳ ಕುರಿತು ಡೇಟಾವನ್ನು Firefox Lite ನಮಗೆ ಕಳುಹಿಸುತ್ತದೆ (ಅಂದರೆ ಭೇಟಿ ನೀಡಲಾದ ವೆಬ್ ಪುಟಗಳ ಸಂಖ್ಯೆ, ಸೆಷನ್ ಅಳತೆ ಮತ್ತು ಸೆಟ್ಟಿಂಗ್‌ಗಳ ಬದಲಾವಣೆಗಳು) ಅಲ್ಲದೆ Mozilla ಅಥವಾ ನಮ್ಮ ಪಾಲುದಾರರಿಂದ ನೀಡಲಾದ Firefox Lite ವೈಶಿಷ್ಟ್ಯಗಳನ್ನು (ಅಂದರೆ Firefox Lite ಹುಡುಕಾಟದ ವೈಶಿಷ್ಟ್ಯಗಳು ಮತ್ತು ಹುಡುಕಾಟ ಪಾಲುದಾರರ ಶಿಫಾರಸುಗಳು) ನೀಡುತ್ತದೆ.

  • ತಾಂತ್ರಿಕ ಡೇಟಾ: Firefox Lite ನಿಮ್ಮ Firefox Lite ಆವೃತ್ತಿ ಮತ್ತು ಭಾಷೆ; ಸಾಧನದ ಆಪರೇಟಿಂಗ್ ಸಿಸ್ಟಂ ಮತ್ತು ಹಾರ್ಡ್‌ವೇರ್ ಕಾನ್ಫಿಗರೇಶನ್; ಮೆಮೊರಿ, ಕ್ರ್ಯಾಶ್‌ಗಳು ಮತ್ತು ದೋಷಗಳ ಕುರಿತು ಮೂಲ ಮಾಹಿತಿ; ನವೀಕರಣಗಳಂತಹ ಸ್ವಯಂಚಾಲಿತ ಪ್ರಕ್ರಿಯೆಗಳ ಫಲಿತಾಂಶ ಮತ್ತು ಸಕ್ರಿಯಗೊಳಿಸುವಿಕೆಯ ಕುರಿತು ಡೇಟಾವನ್ನು ನಮಗೆ ಕಳುಹಿಸುತ್ತದೆ. Firefox Lite ನಮಗೆ ಡೇಟಾವನ್ನು ಕಳುಹಿಸಿದಾಗ, ನಿಮ್ಮ IP ವಿಳಾಸವನ್ನು ನಮ್ಮ ಸರ್ವರ್ ಲಾಗ್‌ಗಳ ಒಂದು ಭಾಗವಾಗಿ ತಾತ್ಕಾಲಿಕವಾಗಿ ಸಂಗ್ರಹಿಸಲಾಗುತ್ತದೆ.

Firefox Lite ಗಾಗಿ ವಿವರವಾದ ದಾಖಲೆಯನ್ನು ಇಲ್ಲಿ ಓದಿ ಅಥವಾ ನಿಮ್ಮ ಸೆಟ್ಟಿಂಗ್‌ಗಳಲ್ಲಿ “ಬಳಕೆ ಡೇಟಾವನ್ನು ಕಳುಹಿಸು” ಆಫ್ ಮಾಡಿ.

ಸಂಬಂಧಿಸಿದ ವಿಷಯವನ್ನು ಸೂಚಿಸಿ

Firefox Lite ಉನ್ನತ ಸೈಟ್‌ಗಳು (Mozilla ದಿಂದ ಮೊದಲ ಬಾರಿಗೆ Firefox Lite ಬಳಕೆದಾರರಿಗೆ ಸೂಚಿಸಲಾದ ವೆಬ್‌ಸೈಟ್‌ಗಳು) ಮತ್ತು ವಿಷಯ ಹಾಗೂ ಸೇವೆಗಳಂತಹ (ವೈಯಕ್ತೀಕರಿಸದಿರುವ ಸುದ್ದಿ, ಶಾಪಿಂಗ್, ಆಟಗಳು ಮತ್ತು ಇನ್ನಷ್ಟು) ವಿಷಯವನ್ನು ಪ್ರದರ್ಶಿಸುತ್ತದೆ.

  • ತಾಂತ್ರಿಕ ಮತ್ತು ಸಂವಹನ ಡೇಟಾ: ಸ್ಥಿತಿ, ಗಾತ್ರ ಮತ್ತು ಎರಡೂ ಉನ್ನತ ಸೈಟ್‌ಗಳ ಸ್ಥಾನ ಮತ್ತು ನಾವು ಸೂಚಿಸುವಂತಹ ವಿಷಯ ಹಾಗೂ ಸೇವೆಗಳಂತಹ ಡೇಟಾವನ್ನು, ಅಲ್ಲದೆ ಸೂಚಿಸಿದ ವಿಷಯದೊಂದಿಗೆ ನಿಮ್ಮ ಸಂವಹನಗಳ ಕುರಿತು ಮೂಲ ಡೇಟಾವನ್ನು ಸಹ Firefox Lite ನಮಗೆ ಕಳುಹಿಸುತ್ತದೆ. ಇದು ಸೂಚಿಸಿದ ವಿಷಯವನ್ನು ಎಷ್ಟು ಬಾರಿ ಪ್ರದರ್ಶಿಸಲಾಗಿದೆ ಅಥವಾ ಕ್ಲಿಕ್ ಮಾಡಲಾಗಿದೆ ಮತ್ತು ಸೂಚಿಸಿರುವುದರೊಂದಿಗೆ ತೊಡಗಿಸಿಕೊಂಡ ಸಮಯವನ್ನು ಒಳಗೊಂಡಿರುತ್ತದೆ.

  • ವಿಷಯ ಮತ್ತು ಸೇವೆಗಳು: Firefox Lite ವಿಷಯ ಮತ್ತು ಸೇವೆಗಳು ಎಂಬುದು ಸ್ಥಳೀಕರಿಸಲಾದ ಸುದ್ದಿ, ಆಟಗಳು, ವ್ಯವಹಾರಗಳು ಮತ್ತು ಕೆಲವು ದೇಶಗಳಲ್ಲಿ ನಮ್ಮ ಪಾಲುದಾರರಿಂದ ಇನ್ನಷ್ಟು ಕೊಡುಗೆಗಳಾಗಿವೆ. ಕೆಲವು ಸಂದರ್ಭಗಲ್ಲಿ, ಸಲಹೆ ನೀಡಲಾದ ವಿಷಯವನ್ನು ನೀವು ಕ್ಲಿಕ್ ಮಾಡಿದಾಗ, ನಾವು ಮೂರನೇ ವ್ಯಕ್ತಿಯ ವಿಷಯದ ಮಾಲೀಕರಿಗೆ ಅವರ ವಿಷಯವು Firefox Lite ನಲ್ಲಿ ಕಂಡುಬಂದಿದೆ ಎಂದು ತಿಳಿಸುತ್ತೇವೆ ಆದರೆ ಯಾರಿಗೆ ಕಂಡುಬಂದಿದೆ ಎಂದು ತಿಳಿಸುವುದಿಲ್ಲ. ಇದು YouTube ನ ವಿಷಯವನ್ನು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನೀವು YouTube ನ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ಓದಬಹುದು. ಹೆಚ್ಚಿನ ವಿವರಗಳಿಗಾಗಿಇಲ್ಲಿ ವೀಕ್ಷಿಸಿ.

  • ವಿಷಯದ ಡೇಟಾ: ಸೂಚಿಸಿದ ವಿಷಯದಲ್ಲಿ ಜನರು ತೊಡಗಿಸಿಕೊಳ್ಳುವ ವಿಷಯದ ಪ್ರಕಾರಗಳ ಕುರಿತು ಕೆಲವು ಪಾಲುದಾರರು ನಮಗೆ ಒಟ್ಟಾರೆ ಮಾಪನಗಳನ್ನು ಕಳುಹಿಸುತ್ತಾರೆ, ಉದಾರಣೆಗೆ, ಶಾಪಿಂಗ್, ಕ್ರೀಡೆ ಅಥವಾ ಸುದ್ದಿ ಆದರೆ ವಿಷಯದೊಂದಿಗೆ ತೊಡಗಿಸಿಕೊಳ್ಳುವ ವ್ಯಕ್ತಿಗಳ ಗುರುತನ್ನು Mozilla ಸ್ವೀಕರಿಸುವುದಿಲ್ಲ.

ನಮ್ಮ ಮಾರ್ಕೆಟಿಂಗ್ ಅನ್ನು ಅಳತೆ ಮಾಡಿ ಮತ್ತು ಬೆಂಬಲಿಸಿ

  • ಶಿಫಾರಸು ಮತ್ತು ಪ್ರಚಾರದ ಡೇಟಾ: ನಮ್ಮ ಮಾರ್ಕೆಟಿಂಗ್ ಪ್ರಚಾರಗಳನ್ನು ಸುಧಾರಿಸಲು ಸಹಾಯ ಮಾಡಲು, Firefox Lite ವೆಬ್‌ಸೈಟ್ ಡೊಮೇನ್ ಅಥವಾ Firefox Lite ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಮತ್ತು ಸ್ಥಾಪಿಸಲು ನಿಮಗೆ ಶಿಫಾರಸು ಮಾಡಿದಂತಹ ಜಾಹೀರಾತು ಪ್ರಚಾರದಂತಹ “ಶಿಫಾರಸು ಡೇಟಾ” ವನ್ನು ನಾವು ಬಳಸಬಹುದು. ಈ ಡೇಟಾವನ್ನು ನಮ್ಮ ವಿಶ್ಲೇಷಣೆ ತಂಡದವರು ಇರಿಸಿಕೊಂಡಿರುತ್ತಾರೆ, ನೀವು Firefox Lite ಅನ್ನು ಪ್ರಾರಂಭಿಸಿದಾಗ ಹೊಂದಿಸಲಾಗುತ್ತದೆ ಮತ್ತು ಒದಗಿಸಲಾಗುತ್ತದೆ ಮತ್ತು Google ಜಾಹೀರಾತು ಐಡಿ, ಟೈಮ್‌ಸ್ಟ್ಯಾಂಪ್, ರಾಷ್ಟ್ರ, ಭಾಷೆ, ಆಪರೇಟಿಂಗ್ ಸಿಸ್ಟಂ ಮತ್ತು ಆಪ್ ಆವೃತ್ತಿಯನ್ನು ಸಹ ಒಳಗೊಂಡಿರುತ್ತದೆ. ಶಿಫಾರಸು ಪ್ರೋಗ್ರಾಂಗಳನ್ನು ನಿರ್ವಹಿಸಲು ಮತ್ತು ನೀವು ಸಲ್ಲಿಸಲು ಆಯ್ಕೆಮಾಡಿಕೊಳ್ಳುವಂತಹ ಯಾವುದೇ ಡೇಟಾವನ್ನು ನಿರ್ವಹಿಸಲು ನಾವು ಮೂರನೇ ವ್ಯಕ್ತಿಯ ಮಾರಾಟಗಾರರನ್ನು ಸಹ ಬಳಸಿಕೊಳ್ಳಬಹುದು.

  • ಬಹುಮಾನದ ಸವಾಲುಗಳು: ಬಹುಮಾನ ಸವಾಲುಗಳಲ್ಲಿ ಪಾಲ್ಗೊಳ್ಳಲು Firefox ಖಾತೆ ಅಗತ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ, ನೀವು Firefox ಖಾತೆಗಳಿಗಾಗಿ ಗೌಪ್ಯತೆ ಪ್ರಕಟಣೆಯನ್ನು ನೀವು ಓದಬಹುದು. ನಮ್ಮ ಬಹುಮಾನ ಸವಾಲುಗಳಲ್ಲಿ ಒಂದರಲ್ಲಿ ನೀವು ಪಾಲ್ಗೊಳ್ಳಲು ತೀರ್ಮಾನಿಸಿದರೆ, ಸವಾಲಿನಲ್ಲಿ ಒಳಗೊಂಡಿರುವ Firefox Lite ವೈಶಿಷ್ಟ್ಯಗಳೊಂದಿಗೆ ನಿಮ್ಮ ಸಂವಹನಗಳ ಕುರಿತು Mozilla ಮಾಹಿತಿ ಸ್ವೀಕರಿಸುತ್ತದೆ. ನಿಮ್ಮ Firefox ಖಾತೆಯನ್ನು ನೀವು ಸಂಪರ್ಕಪಡಿಸಿದಾಗ, ಆ ಬಹುಮಾನ ಸವಾಲು ಸಂವಹನ ಮಾಹಿತಿಯನ್ನು ನಮ್ಮ Firefox ಖಾತೆಯೊಂದಿಗೆ ನಾವು ಸಂಯೋಜಿಸುತ್ತೇವೆ. ನಮ್ಮ ಪಾಲುದಾರರ ವೆಬ್‌ಸೈಟ್‌ನಲ್ಲಿ ನಿಮ್ಮ ರಿವಾರ್ಡ್ ಅನ್ನು ನೀವು ರಿಡೀಮ್ ಮಾಡಿದರೆ, ನಿಮ್ಮ ಖರೀದಿಗಳ ಕುರಿತು ಆ ಪಾಲುದಾರರು ಮಾಹಿತಿ ಸ್ವೀಕರಿಸುತ್ತಾರೆ. ನಮ್ಮ ಮೂರನೇ ವ್ಯಕ್ತಿಯ ಪಾಲುದಾರರ ವೆಬ್‌ಸೈಟ್‌ಗಳಲ್ಲಿ Firefox Lite ಬಳಕೆದಾರರು ಏನನ್ನು ಖರೀದಿಸುತ್ತಾರೆ ಎಂಬುದರ ಕುರಿತು ನಾವು ಒಟ್ಟಾರೆ ಡೇಟಾವನ್ನು ಸ್ವೀಕರಿಸಬಹುದು ಆದರೆ ಪ್ರತ್ಯೇಕ ವ್ಯಕ್ತಿ ಏನನ್ನು ಖರೀದಿಸಿದ್ದಾರೆ ಎಂಬುದರ ಕುರಿತು ಅಲ್ಲ. Firefox Lite ಬಳಕೆದಾರರಿಗೆ ಸಂಬಂಧಿಸಿದ ವಿಷಯವನ್ನು ಸೂಚಿಸಲು ಸಹಾಯ ಮಾಡಲು ನಾವು ಈ ಮಾಹಿತಿಯನ್ನು ಬಳಸಿಕೊಳ್ಳುತ್ತೇವೆ.

Learn more about ಶಿಫಾರಸು ಮತ್ತು ಪ್ರಚಾರದ ಡೇಟಾ ಕುರಿತು ಹೆಚ್ಚಿಗೆ ತಿಳಿದುಕೊಳ್ಳಿ.

ನಮ್ಮ ಉತ್ಪನ್ನವನ್ನು ಸುಧಾರಿಸಿ

ಕಾರ್ಯಕ್ಷಮತೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡಲು, ಕ್ರ್ಯಾಶ್‌ಗಳ ಕುರಿತು ಬೆಂಬಲಿಸಿ, ಹೊಸ ವೈಶಿಷ್ಟ್ಯಗಳನ್ನು ಕೊಡುಗೆ ನೀಡಿ ಮತ್ತು Firefox Lite ನೊಂದಿಗೆ ನಿಮ್ಮ ಅನುಭವವನ್ನು ಅರ್ಥ ಮಾಡಿಕೊಳ್ಳಿ ಹಾಗೂ A/B ಪರೀಕ್ಷೆ ಮತ್ತು ಉತ್ಪನ್ನದಲ್ಲಿನ ಸಂದೇಶ ಕಳುಹಿಸುವಿಕೆ ಮೂಲಕ ಬಳಕೆದಾರರ ಅನುಭವವನ್ನು ಸುಧಾರಿಸಿ, Firefox Lite Google ನ Firebase ಪ್ಲ್ಯಾಟ್‌ಫಾರ್ಮ್ ಬಳಸುತ್ತದೆ, ಇದು ನಿಮ್ಮ ಸಾಧನದಿಂದ ಡೇಟಾ ಸ್ವೀಕರಿಸುತ್ತದೆ. Firebase ಡೇಟಾ ಸಂಗ್ರಹಣೆ ಕುರಿತು ಇನ್ನಷ್ಟು ತಿಳಿದುಕೊಳ್ಳಿ ಅಥವಾ ನಿಮ್ಮ ಸೆಟ್ಟಿಂಗ್‌ಗಳಲ್ಲಿ “ಬಳಕೆಯ ಡೇಟಾ ಕಳುಹಿಸಿ” ಆಫ್ ಮಾಡಿ.


ನೀವು ಈ ವೈಶಿಷ್ಟ್ಯಗಳನ್ನು ಬಳಸಿದರೆ, Firefox Lite ಕಾರ್ಯವನ್ನು ಒದಗಿಸಲು ಡೇಟಾವನ್ನು ಹಂಚಿಕೊಳ್ಳುತ್ತದೆ:

ಹುಡುಕಿ

Firefox Lite ನಲ್ಲಿ ನೀವು ಹುಡುಕಾಟ ಪಟ್ಟಿಯಿಂದ ನೇರವಾಗಿ ಹುಡುಕಬಹುದು. Mozilla ನಿಮ್ಮ ಹುಡುಕಾಟ ಕ್ವೈರಿಗಳನ್ನು ಸ್ವೀಕರಿಸುವುದಿಲ್ಲ. ಕ್ವೈರಿ ಡೇಟಾವನ್ನು ನಿಮ್ಮ ಹುಡುಕಾಟ ಪೂರೈಕೆದಾರರಿಗೆ ಕಳುಹಿಸಲಾಗುತ್ತದೆ, ಅದು ತನ್ನದೇ ಆದ ಗೌಪ್ಯತೆ ನೀತಿಯನ್ನು ಹೊಂದಿರುತ್ತದೆ.

  • ಹುಡುಕಾಟ ಸಲಹೆಗಳು: Firefox Lite ಪೂರ್ವನಿಯೋಜಿತವಾಗಿ ಇತರ ಜನರು ಹುಡುಕಿದಂತಹ ಸಾಮಾನ್ಯ ಪದಗಳನ್ನು ಹುಡುಕಲು ಸಹಾಯ ಮಾಡಲು ಮತ್ತು ನಿಮ್ಮ ಹುಡುಕಾಟ ಅನುಭವನ್ನು ಸುಧಾರಿಸುವ ಸಲುವಾಗಿ ಹುಡುಕಾಟ ಕ್ವೈರಿಗಳನ್ನು ನಿಮ್ಮ ಹುಡುಕಾಟ ಪೂರೈಕೆದಾರರಿಗೆ ಕಳುಹಿಸಲಾಗುತ್ತದೆ. ನಿಮ್ಮ ಆಯ್ಕೆ ಮಾಡಲಾದ ಹುಡುಕಾಟ ಪೂರೈಕೆದಾರರು ಹುಡುಕಾಟ ಸಲಹೆಗಳನ್ನು ಬೆಂಬಲಿಸದಿದ್ದರೆ ಈ ಡೇಟಾವನ್ನು ಕಳುಹಿಸುವುದಿಲ್ಲ.

ಸ್ಥಳ

  • Google ನ ಭೌಗೋಳಿಕ ಸೇವೆಗೆ ಸ್ಥಳದ ಡೇಟಾ: Firefox Lite ಯಾವಾಗಲೂ ವಿನಂತಿಸುವ ವೆಬ್‌ಸೈಟ್‌ನೊಂದಿಗೆ ನಿಮ್ಮ ಸ್ಥಳವನ್ನು ದೃಢೀಕರಿಸುವ ಮತ್ತು ಹಂಚಿಕೊಳ್ಳುವ ಮೊದಲು ಕೇಳುತ್ತದೆ (ಉದಾಹರಣೆಗೆ, ನಕ್ಷೆಯ ವೆಬ್‌ಸೈಟ್‌ಗೆ ನಿಮಗೆ ಮಾರ್ಗಗಳ ನಿರ್ದೇಶನ ನೀಡಲು ನಿಮ್ಮ ಸ್ಥಳದ ಅಗತ್ಯವಿರುತ್ತದೆ). ಸ್ಥಳವನ್ನು ದೃಢೀಕರಿಸಲು, Firefox Lite ನಿಮ್ಮ ಆಪರೇಟಿಂಗ್ ಸಿಸ್ಟಂನ ಭೌಗೋಳಿಕ ವೈಶಿಷ್ಟ್ಯಗಳು, ವೈ-ಫೈ ನೆಟ್‌ವರ್ಕ್‌ಗಳು, ಸೆಲ್ ಫೋನ್ ಟವರ್‌ಗಳು ಅಥವಾ IP ವಿಳಾಸವನ್ನು ಬಳಸಿಕೊಳ್ಳಬಹುದು ಮತ್ತು ಈ ಡೇಟಾವನ್ನು Google ನ ಭೌಗೋಳಿಕ ಸೇವೆಗೆ ಕಳುಹಿಸಬಹುದು, ಇದು ತನ್ನದೇ ಆದ ಗೌಪ್ಯತೆ ನೀತಿಯನ್ನು ಹೊಂದಿರುತ್ತದೆ.

ಇನ್ನಷ್ಟು ತಿಳಿಯಿರಿ.