Firefox

ಸ್ಥಳದ-ಅರಿವಿರುವ ಜಾಲಾಟ

ಫೈರ್ಫಾಕ್ಸ್ ಈಗ ನೀವು ಯಾವ ಸ್ಥಳದಲ್ಲಿದ್ದೀರಿ ಎಂದು ಜಾಲತಾಣಗಳಿಗೆ ತಿಳಿಸುತ್ತದೆ, ಇದರಿಂದಾಗಿ ಹೆಚ್ಚು ಸೂಕ್ತವಾದ ಹಾಗು ಹೆಚ್ಚು ಉಪಯುಕ್ತವಾದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದು ಜಾಲವನ್ನು ಚಾಣಾಕ್ಷಗೊಳಿಸುವ ಒಂದು ವಿಧಾನವಾಗಿದೆ ಹಾಗು ಸಂಪೂರ್ಣವಾಗಿ ನಿಮ್ಮ ಖಾಸಗಿತನವನ್ನು ಸಂರಕ್ಷಿಸುತ್ತದೆ. ಪ್ರಯತ್ನಿಸಿ ನೋಡಿ!

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಸ್ಥಳದ-ಅರಿವಿರುವ ಜಾಲಾಟ ಎಂದರೇನು?

ಲೊಕೇಶನ್-ಅವೇರ್ ವೀಕ್ಷಣೆಯನ್ನು ಬಳಸುವ ಜಾಲತಾಣಗಳು ನಿಮಗೆ ಸೂಕ್ತವಾದ ಮಾಹಿತಿಯನ್ನು ನೀಡಲು ಅಥವ ನೀವು ಹುಡುಕಾಟ ನಡೆಸುವಾಗ ನಿಮ್ಮ ಸಮಯವನ್ನು ಉಳಿಸುವ ಸಲುವಾಗಿ ನೀವು ಎಲ್ಲಿದ್ದೀರಿ ಎಂದು ಕೇಳುತ್ತದೆ. ಉದಾಹರಣೆಗೆ ನೀವು ಒಂದು ನೀವಿರುವ ಸ್ಥಳಕ್ಕೆ ಸಮೀಪದಲ್ಲಿರುವ ಒಂದು ಪಿಝ್ಝಾ ರೆಸ್ಟುರಾ ಒಂದನ್ನು ಹುಡುಕುತ್ತಿದ್ದಿರಿ ಎಂದಿಟ್ಟುಕೊಳ್ಳೋಣ.ಹುಡುಕಾಟ ನಡೆಸುವಾಗ, ಒಂದು ಜಾಲತಾಣದಲ್ಲಿ ಕೇವಲ "pizza"ಎಂದು ನಮೂದಿಸಿದಾಗ ನಿಮಗೆ ಬೇಕಿರುವ ಮಾಹಿತಿಯನ್ನು ನೀಡಲು ನೀವು ಇರುವ ಸ್ಥಳವನ್ನು ತಿಳಿಸುವಂತೆ ಕೇಳುತ್ತದೆ... ಬೇರಾವುದೆ ಹೆಚ್ಚಿನ ಮಾಹಿತಿಯ ಅಗತ್ಯವಿರುವುದಿಲ್ಲ.

ಅಥವ, ನೀವು ಎಲ್ಲಿಗಾದರೂ ತೆರಳಲು ಸರಿಯಾದ ದಿಕ್ಕನ್ನು(ಮಾರ್ಗವನ್ನು) ಹುಡುಕುತ್ತಿದ್ದರೆ, ನೀವು ಎಲ್ಲಿಂದ ಹೊರಡಲಿದ್ದೀರಿ ಎಂದು ತಾಣವು ಮೊದಲೆ ಅರಿತಿರುತ್ತದೆ, ಆದ್ದರಿಂದ ಕೇವಲ ಎಲ್ಲಿಗೆ ಹೋಗಬೇಕು ಎಂದು ತಿಳಿಸಿದರೆ ಸಾಕಾಗುತ್ತದೆ.

ಈ ಸೇವೆಯು ಸಂಪೂರ್ಣವಾಗಿ ಐಚ್ಛಿಕವಾಗಿರುತ್ತದೆ – ನಿಮ್ಮ ಅನುಮತಿ ಇಲ್ಲದೆ ಫೈರ್ಫಾಕ್ಸ್ ನೀವಿರುವ ಸ್ಥಳದ ಬಗ್ಗೆ ಬೇರೆ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ – ಹಾಗು ಇದನ್ನು ನಿಮ್ಮ ಖಾಸಗಿತನವನ್ನು ಗಮನದಲ್ಲಿಟ್ಟುಕೊಂಡೆ ನಿರ್ವಹಿಸಲಾಗುವುದು. ಅಲ್ಲದೆ, ಜಾಲ ವಿಕಸನಾಗಾರರಿಗೆ ಸುಲಭವಾಗಿ ಅಳವಡಿಸಿಕೊಳ್ಳಲು ನೆರವಾಗುವಂತೆ ಫೈರ್ಫಾಕ್ಸಿನ ಬೇರೆ ಎಲ್ಲಾ ಘಟಕಗಳಂತೆ ಇದನ್ನೂ ಸಹ ಮುಕ್ತ ಮಾನಕಗಳನ್ನು (open standards) ಬಳಸಿಕೊಂಡು ರಚಿಸಲಾಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ?

ನೀವು ಯಾವುದಾದರೂ ಲೊಕೇಶನ್-ಅವೇರ್ ಜಾಲತಾಣಕ್ಕೆ ಭೇಟಿ ನೀಡಿದಾಗ, ನೀವಿರುವ ಸ್ಥಳದ ಬಗೆಗಿನ ಮಾಹಿತಿಯನ್ನು ನೀವು ಹಂಚಿಕೊಳ್ಳಲು ಬಯಸುತ್ತೀರೆ ಎಂದು ಫೈರ್ಫಾಕ್ಸ್ ನಿಮ್ಮನ್ನು ಕೇಳುತ್ತದೆ.

ನೀವು ಅಂಗೀಕರಿಸಿದಲ್ಲಿ, ಫೈರ್ಫಾಕ್ಸ್ ಹತ್ತಿರದ ವೈರ್ಲೆಸ್ ಕೇಂದ್ರಗಳನ್ನು ಹಾಗು ನಿಮ್ಮ ಗಣಕದ IP ವಿಳಾಸವನ್ನು ಸಂಗ್ರಹಿಸುತ್ತದೆ. ನಂತರ ನೀವಿರುವ ಸ್ಥಳವನ್ನು ಪತ್ತೆಹಚ್ಚಲು ಫೈರ್ಫಾಕ್ಸ್ ಈ ಮಾಹಿತಿಯನ್ನು ಡೀಫಾಲ್ಟ್ geolocation ಸರ್ವಿಸ್ ಪ್ರೊವೈಡರಾದಂತಹ Google Location Services ಗೆ ಕಳುಹಿಸುತ್ತದೆ. ಪತ್ತೆಹಚ್ಚಲಾದ ಆ ಸ್ಥಳದ ಮಾಹಿತಿಯನ್ನು ಕೋರುವ ಜಾಲತಾಣದೊಂದಿಗೆ ಹಂಚಿಕೊಳ್ಳಲಾಗುವುದು.

ನೀವು ಅಂಗೀಕರಿಸದೆ ಇದ್ದಲ್ಲಿ, ಫೈರ್ಫಾಕ್ಸ್ ಏನನ್ನೂ ಮಾಡದೆ ಸುಮ್ಮನಾಗುತ್ತದೆ.

ಸ್ಥಳಗಳ ಮಾಹಿತಿ ಎಷ್ಟರ ಮಟ್ಟಿಗೆ ನಿಖರವಾಗಿರುತ್ತದೆ?

ಸ್ಥಳದಿಂದ ಸ್ಥಳಕ್ಕೆ ಅನುಗುಣವಾಗಿ ನಿಖರತೆಯು ಬದಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ, ನಮ್ಮ ಸರ್ವಿಸ್ ಪ್ರೊವೈಡರುಗಳು ಸ್ಥಳವನ್ನು ಕೆಲವೆ ಮೀಟರುಗಳ ಸುತ್ತಳತೆಯಲ್ಲಿದೆಯೆಂದು ಸ್ಪಷ್ಟವಾಗಿ ತಿಳಿಸಬಲ್ಲದು. ಆದರೆ, ಕೆಲವು ಪ್ರದೇಶಗಳಲ್ಲಿ ಇದಕ್ಕಿಂತ ಬಹಳಷ್ಟು ಹೆಚ್ಚಿನದಾಗಿರಬಹುದು. ನಮ್ಮ ಸರ್ವಿಸ್ ಪ್ರೊವೈಡರುಗಳು ನೀಡಿದ ಮಾಹಿತಿಯು ಕೇವಲ ಅಂದಾಜು ಮಾಡಲಾದ ಮಾಹಿತಿಯಾಗಿರುತ್ತದೆ ಹಾಗು ಇದರ ನಿಖರತೆಯ ಬಗ್ಗೆ ಯಾವುದೆ ಗ್ಯಾರಂಟಿಯನ್ನು ನೀಡಲು ಸಾಧ್ಯವಿರುವುದಿಲ್ಲ. ದಯವಿಟ್ಟು ಈ ಮಾಹಿತಿಯನ್ನು ತುರ್ತಿನ ಸಮಯದಲ್ಲಿ ಬಳಸಬೇಡಿ. ಯಾವಾಗಲೂ ನಿಮ್ಮ ಸಾಮಾನ್ಯ ಪರಿಜ್ಞಾನವನ್ನು ಬಳಸಿ.

ಯಾವ ಮಾಹಿತಿಯನ್ನು ಕಳುಹಿಸಲಾಗುತ್ತದೆ ಹಾಗು ಯಾರಿಗೆ ಕಳುಹಿಸಲಾಗುತ್ತದೆ? ನನ್ನ ಖಾಸಗಿತನವು ಹೇಗೆ ಸಂರಕ್ಷಿಸಲಾಗಿರುತ್ತದೆ?

ನಿಮ್ಮ ಖಾಸಗಿತನವು ನಮಗೆ ಬಹಳ ಮುಖ್ಯವಾದ ಅಂಶ, ಹಾಗು ನಿಮ್ಮ ಅನುಮತಿ ಇಲ್ಲದೆ ಫೈರ್ಫಾಕ್ಸ್ ನಿಮ್ಮ ಸ್ಥಳದ ಮಾಹಿತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದಿಲ್ಲ. ನಿಮ್ಮ ಮಾಹಿತಿಯನ್ನು ಬಯಸುವ ಒಂದು ತಾಣಕ್ಕೆ ನೀವು ಭೇಟಿ ನೀಡಿದಾಗ,ಮನವಿ ಸಲ್ಲಿಸುವ ಜಾಲತಾಣದ ಒಳಗೆ ಹಾಗು ಥರ್ಡ್-ಪಾರ್ಟಿ ಸರ್ವಿಸ್ ಪ್ರೊವೈಡರೊಂದಿಗೆ ಯಾವುದೆ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ನಿಮ್ಮನ್ನು ಕೇಳಲಾಗುತ್ತದೆ.

ಡೀಫಾಲ್ಟಾಗಿ, ಈ ಕೆಳಗಿನವುಗಳು ಕಳುಹಿಸುವ ಮೂಲಕ ನೀವಿರುವ ಸ್ಥಳವನ್ನು ಪತ್ತೆಹಚ್ಚಲು Google Location Services ಅನ್ನು ಫೈರ್ಫಾಕ್ಸ್ ಬಳಸುತ್ತದೆ:

  • ನಿಮ್ಮ ಗಣಕದ IP ವಿಳಾಸ,
  • ಹತ್ತಿರದ ನಿಸ್ತಂತು ಪ್ರವೇಶ ಬಿಂದುವಿನ ಬಗೆಗಿನ ಮಾಹಿತಿ, ಮತ್ತು
  • ಪ್ರತಿ ಎರಡು ವಾರಕ್ಕೊಮ್ಮೆ ವಾಯಿದೆ ಪೂರ್ಣಗೊಳ್ಳುವ, ಗೂಗಲ್‌ನಿಂದ ನಿಯೋಜಿಸಲಾದ ಒಂದು random client identifier.

ಫೈರ್ ಫಾಕ್ಸ್ ನಿಂದ ಕಲೆಹಾಕಲ್ಪಡುವ ಹಾಗೂ ಬಳಸಲ್ಪಡುವ ಮಾಹಿತಿಯ ಸಂಪೂರ್ಣ ವಿವರಗಳಿಗೆ, ದಯವಿಟ್ಟು ಫೈರ್ ಫಾಕ್ಸ್ ಗೌಪ್ಯತಾ ಸೂಚನಾಪತ್ರ ವನ್ನು ನೋಡಿ

Google Location Services ಯು ಅಂದಾಜು ಮಾಡಲಾದ ನಿಮ್ಮ ಸ್ಥಳದ ಮಾಹಿತಿಯನ್ನು ಕಳುಹಿಸುತ್ತದೆ (ಉದಾ, ಅಕ್ಷಾಂಶ ಹಾಗು ರೇಖಾಂಶ).ಗೂಗಲ್‌ನಿಂದ ಸಂಗ್ರಹಿಸಲಾಗುವ ಮಾಹಿತಿಯ ಹಾಗಯ ಅದನ್ನು ಬಳಸಲಾಗುವ ಬಗೆಗಿನ ಒಂದು ಸಂಪೂರ್ಣವಾಗಿ ವಿವರಣೆಗಾಗಿ, ದಯವಿಟ್ಟು Google Geolocation ಗೌಪ್ಯತಾ ನಿಯಮವನ್ನು (ಇಂಗ್ಲೀಷಿನಲ್ಲಿದೆ) ನೋಡಿ.

ನಿಮ್ಮ ಖಾಸಗಿತನವನ್ನು ಸಂರಕ್ಷಿಸುವ ಉದ್ಧೇಶದಿಂದ ಮಾಹಿತಿಯನ್ನು ಒಂದು ಗೂಢಲಿಪೀಕರಿಸಲಾದ ಸಂಪರ್ಕದ ಮೂಲಕ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಫೈರ್ಫಾಕ್ಸಿಗೆ ನೀವಿರುವ ಸ್ಥಳದ ಮಾಹಿತಿ ದೊರೆತ ನಂತರ ಅದಕ್ಕಾಗಿ ಮನವಿ ಸಲ್ಲಿಸಲಾದ ಜಾಲತಾಣಕ್ಕೆ ಅದನ್ನು ರವಾನಿಸಲಾಗುತ್ತದೆ. ಎಂದಿಗೂ ಸಹ ನೀವಿರುವ ಸ್ಥಳವನ್ನಾಗಲಿ ಅಥವ ನೀವು ಭೇಟಿ ನೀಡುತ್ತಿರುವ ತಾಣವನ್ನಾಗಲಿ, ಇಲ್ಲವೆ ಯಾವುದೆ ಕುಕಿಗಳನ್ನಾಗಲಿ, Google Location Services ನೊಂದಿಗೆ ಹಂಚಿಕೊಳ್ಲಲಾಗುವುದಿಲ್ಲ.

Google Location Services ನಿಂದ ಸಂಗ್ರಹಿಸಲಾದ ನಿಮ್ಮ ಸ್ಥಳದ ಮಾಹಿತಿಯನ್ನು ಮೊಝಿಲ್ಲಾ ಆಗಲಿ ಗೂಗಲ್ ಆಗಲಿ ಯಾವುದೆ ಕಾರಣಕ್ಕೂ ನಿಮ್ಮನ್ನು ಪತ್ತೆ ಮಾಡಲು ಅಥವ ನಿಮ್ಮ ಮೇಲೆ ಗೂಢಚಾರಿಕೆ ಮಾಡಲು ಎಂದಿಗೂ ಬಳಸುವುದಿಲ್ಲ.

ನೀವಿರುವ ಸ್ಥಳದ ಮಾಹಿತಿಯನ್ನು ಪಡೆದುಕೊಂಡ ತಾಣವನ್ನು ಅದನ್ನು ಏನು ಮಾಡುತ್ತದೆ ಎನ್ನುವುದನ್ನು ತಿಳಿಯಲು, ದಯವಿಟ್ಟು ಆ ತಾಣದ ಗೌಪ್ಯತಾ ನಿಯಮವನ್ನು ನೋಡಿ.

ನಿಮ್ಮ ಗೌಪ್ಯತೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನೀವು ಇದನ್ನು ಸಹಾ ಓದಲೇಬೇಕು:

ನಾನು ಜಾಲವನ್ನು ಬಳಸುವಾಗ ನನ್ನನ್ನು ಗಮನಿಸಲಾಗುತ್ತದೆಯೆ?

ಇಲ್ಲ. ಒಂದು ಜಾಲತಾಣವು ಮನವಿ ಸಲ್ಲಿಸಿದಾಗ ಮಾತ್ರ ಫೈರ್ಫಾಕ್ಸ್ ನಿಮ್ಮನ್ನು ಕೇಳುತ್ತದೆ, ಹಾಗು ಬಳಕೆದಾರರು ಮನವಿಯನ್ನು ಅಂಗೀಕರಿಸಿದಲ್ಲಿ ಮಾತ್ರ ಅವರು ಇರುವ ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.ಫೈರ್ಫಾಕ್ಸ್ ನೀವು ವೀಕ್ಷಿಸಿದಂತೆಲ್ಲಾ ನಿಮ್ಮ ಜಾಡನ್ನು ಅನುಸರಿಸುವುದಾಗಲಿ ಅಥವ ನೀವಿರುವ ಸ್ಥಳವನ್ನು ನೆನಪಿಟ್ಟುಕೊಳ್ಳುವುದಿಲ್ಲ.

ಒಂದು ತಾಣಕ್ಕೆ ನಾನು ನೀಡಿದ ಅನುಮತಿಯನ್ನು ಹೇಗೆ ರದ್ದು ಮಾಡಬಹುದು?

ಮನವಿ ಸಲ್ಲಿಸುವ ತಾಣಕ್ಕೆ ನಿಮ್ಮ ಸ್ಥಳದ ಮಾಹಿತಿಯನ್ನು ನೀಡುವಂತೆ ನೀವು ಈಗಾಗಲೆ ಫೈರ್ಫಾಕ್ಸಿಗೆ ಅನುಮತಿಯನ್ನು ಕೊಟ್ಟಿದ್ದು ಆದರೆ ಈಗ ಬದಲಾಯಿಸಬೇಕೆಂದು ಬಯಸಿದಲ್ಲಿ ಸುಲಭವಾಗಿ ಹಾಗೆ ಮಾಡಬಹುದು. ಹೇಗೆಂಬುದನ್ನು ಇಲ್ಲಿ ನೋಡಿ:

  • ನೀವು ಅನುಮತಿ ನೀಡಿರುವ ತಾಣಕ್ಕೆ ತೆರಳಿ
  • ಉಪಕರಣಗಳು ಮೆನುವಿಗೆ ಹೋಗಿ, ನಂತರ ಪುಟದ ಮಾಹಿತಿ ಅನ್ನು ಆಯ್ಕೆ ಮಾಡಿ
  • ಒಪ್ಪಿಗೆಗಳು ಟ್ಯಾಬ್ ಅನ್ನು ಆರಿಸಿ
  • ಸ್ಥಳವನ್ನು ಹಂಚಿಕೊಗಾಗಿನ ಸಿದ್ಧತೆಯನ್ನು ಬದಲಾಯಿಸಿ

ಲೊಕೇಶನ್-ಅವೇರ್ ವೀಕ್ಷಣೆಯನ್ನು ನಾನು ಹೇಗೆ ಶಾಶ್ವತವಾಗಿ ಆಫ್‌ ಮಾಡಬಹುದು?

ಫೈರ್ಫಾಕ್ಸ್ ರಲ್ಲಿ ಲೊಕೇಶನ್-ಅವೇರ್ ವೀಕ್ಷಣೆಯು ಯಾವಾಗಲೂ ಐಚ್ಛಿಕವಾಗಿರುತ್ತದೆ. ನಿಮ್ಮ ಅನುಮತಿ ಇಲ್ಲದೆ ನೀವಿರುವ ಸ್ಥಳದ ಮಾಹಿತಿಯನ್ನು ಕಳುಹಿಸಲಾಗುವುದಿಲ್ಲ. ನೀವು ಈ ಸೌಕರ್ಯವನ್ನು ಸಂಪೂರ್ಣವಾಗಿ ಅಶಕ್ತಗೊಳಿಸಲು ಬಯಸಿದಲ್ಲಿ, ಈ ಕೆಳಗಿನ ಹಂತಗಳನ್ನು ಅನುಸರಿಸಿ:

  • URL ಜಾಗದಲ್ಲಿ, about:config ಎಂದು ನಮೂದಿಸಿ
  • geo.enabled ಅನ್ನು ನಮೂದಿಸಿ
  • geo.enabled ಆದ್ಯತೆಯ ಮೇಲೆ ಎರಡು ಬಾರಿ ಕ್ಲಿಕ್ಕಿಸಿ
  • ಸ್ಥಳದ-ಅರಿವಿರುವ ಜಾಲವೀಕ್ಷಣೆಯನ್ನು ಈಗ ನಿಷ್ಕ್ರಿಯಗೊಳಿಸಲಾಗಿದೆ

ನಾನು ನನ್ನ ಜಾಲತಾಣಕ್ಕೆ ಭೂಸ್ಥಳಮಾಹಿತಿ ಬೆಂಬಲವನ್ನು ಹೇಗೆ ಸೇರಿಸಬಹುದು?

ನೀವು ಭೂಸ್ಥಳಮಾಹಿತಿ ಬೆಂಬಲವನ್ನು ನಿಮ್ಮ ಸೇವೆಗೆ ಈ ಕೆಳಗಿನ ಆದೇಶಗಳನ್ನು ಪಾಲಿಸುವುದರಿಂದ ಸೇರ್ಪಡಿಸಬಹುದು Mozilla ಡೆವೆಲಪರ್ ಕೇಂದ್ರ.