Firefox Lite ವೆಬ್ ಆಧಾರಿತ ಮಾಹಿತಿ ಸೇವೆಗಳು

ಈ Lite ನ ಬೈನರಿ ಆವೃತ್ತಿಯೊಂದಿಗೆ ಕೆಳಗೆ ವಿವರಿಸಲಾದ ನಿಯಮಗಳ ಅಡಿಯಲ್ಲಿ ನಿಮಗಾಗಿ ಒದಗಿಸಲಾದ ವೈಶಿಷ್ಟ್ಯಗಳಲ್ಲಿ ಕೆಲವನ್ನು Firefox Lite ವೆಬ್ ಆಧಾರಿತ ಮಾಹಿತಿ ಸೇವೆಗಳನ್ನು (“ಸೇವೆಗಳು”) ಒದಗಿಸಲು ಬಳಸಲಾಗುತ್ತದೆ.

  1. Mozilla ಮತ್ತು ಅದರ ಕೊಡುಗೆದಾರರು, ಪರವಾನಗಿದಾರರು ಮತ್ತು ಪಾಲುದಾರರು ಹೆಚ್ಚು ನಿಖರವಾದ ಮತ್ತು ನವೀಕೃತ ಸೇವೆಗಳನ್ನು ಒದಗಿಸಲು ಕೆಲಸ ಮಾಡುತ್ತಾರೆ. ಆದಾಗ್ಯೂ, ಈ ಮಾಹಿತಿಯು ಸಮಗ್ರವಾಗಿದೆ ಮತ್ತು ದೋಷಮುಕ್ತವಾಗಿದೆ ಎಂದು ನಾವು ಖಾತ್ರಿ ನೀಡಲಾಗುವುದಿಲ್ಲ. ಉದಾಹರಣೆಗೆ, ಶಾಪಿಂಗ್ ಮಾಹಿತಿಯು ಬದಲಾವಣೆಯಾಗಿರುವ ಅಥವಾ ಮುಕ್ತಾಯವಾಗಿರುವಂತಹ ಐಟಂಗಳನ್ನು ಪಟ್ಟಿ ಮಾಡಬಹುದು.

  2. Mozilla ತನ್ನ ತೀರ್ಮಾನದ ಮೇರೆಗೆ ಸೇವೆಗಳನ್ನು ನಿಲ್ಲಿಸಬಹುದು ಅಥವಾ ಬದಲಾಯಿಸಬಹುದು.

  3. Firefox Lite ನ ಜೊತೆಯಲ್ಲಿ ಈ ಸೇವೆಗಳನ್ನು ನೀವು ಬಳಸಲು ನಿಮಗೆ ಸ್ವಾಗತಿಸಲಾಗುತ್ತದೆ ಮತ್ತು ಹಾಗೆ ಮಾಡಲು Mozilla ನಿಮಗೆ ಹಕ್ಕುಗಳನ್ನು ನೀಡುತ್ತದೆ. Mozilla ಮತ್ತು ಅದರ ಪರವಾನಗಿದಾರರು ಸೇವೆಗಳಲ್ಲಿ ಇತರ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಿಕೊಳ್ಳುತ್ತದೆ. ಈ ನಿಯಮಗಳು Firefox Lite ಗೆ ಅನ್ವಯವಾಗುವಂತಹ ಮತ್ತು ಸಂಬಂಧಿತ Firefox Lite ನ ಮೂಲ ಕೋಡ್ ಆವೃತ್ತಿಗಳಿಗೆ ಅನ್ವಯವಾಗುವ ರೀತಿಯಲ್ಲಿ ಮುಕ್ತ ಮೂಲ ಪರವಾನಗಿಗಳ ಅಡಿಯಲ್ಲಿ ಯಾವುದೇ ಹಕ್ಕುಗಳನ್ನು ಮಿತಿಗೊಳಿಸಲು ಉದ್ದೇಶ ಹೊಂದಿಲ್ಲ.

  4. ಸೇವೆಗಳನ್ನು “ಇದ್ದದ್ದು ಇದ್ದಂತೆ” ಒದಗಿಸಲಾಗುತ್ತದೆ. Mozilla, ಅದರ ಕೊಡುಗೆದಾರರು, ಪರವಾನಗಿದಾರರು ಮತ್ತು ವಿತರಕರು, ಎಲ್ಲಾ ವಾರೆಂಟಿಗಳಿಗೆ ಹಕ್ಕುನಿರಾಕರಣೆ ಮಾಡುತ್ತಾರೆ, ಅದು ವ್ಯಕ್ತ ಅಥವಾ ಅವ್ಯಕ್ತ, ಸೇರಿದಂತೆ ಯಾವುದೇ ಪರಿಮಿತಿ ಇಲ್ಲದೆ, ಮಾರಾಟ ಮಾಡಬಹುದಾದಂತಹ ಸೇವೆಗಳ ವಾರೆಂಟಿಗಳು ಮತ್ತು ನಿಮ್ಮ ನಿರ್ದಿಷ್ಟ ಉದ್ದೇಶಗಳಿಗೆ ಹೊಂದುವಂತಹವನ್ನು ಒದಗಿಸಲಾಗುತ್ತದೆ. ನಿಮ್ಮ ಉದ್ದೇಶಗಳಿಗಾಗಿ ಸೇವೆಗಳನ್ನು ಆಯ್ಕೆಮಾಡಲು ಮತ್ತು ಸೇವೆಗಳ ಗುಣಮಟ್ಟ ಹಾಗೂ ಕಾರ್ಯಕ್ಷಮತೆಗೆ ನೀವು ಸಂಪೂರ್ಣ ಅಪಾಯವನ್ನು ಸಹಿಸಿಕೊಳ್ಳುತ್ತೀರಿ. ಕೆಲವು ನ್ಯಾಯಾಂಗ ವ್ಯಾಪ್ತಿಗಳಲ್ಲಿ ಪರೋಕ್ಷವಾದ ವಾರೆಂಟಿಗಳ ಕುರಿತು ಪರೋಕ್ಷ ವಾರೆಂಟಿಗಳನ್ನು ಹೊರಗಿಡುವುದು ಅಥವಾ ಪರಿಮಿತಿಯನ್ನು ಅನುಮತಿಸುವುದಿಲ್ಲ, ಹಾಗಾಗಿ ಈ ಹಕ್ಕುನಿರಾಕರಣೆಯು ನಿಮಗೆ ಅನ್ವಯಿಸದಿರಬಹುದು.

  5. ಕಾನೂನಿನಿಂದ ಅಗತ್ಯವಿರುವುದನ್ನು ಹೊರತುಪಡಿಸಿ, Mozilla, ಅದರ ಕೊಡುಗೆದಾರರು, ಪರವನಾಗಿದಾರರು ಮತ್ತು ವಿತರಕರು Firefox Lite ಮತ್ತು ಅದರ ಸೇವೆಗಳ ಬಳಕೆಯ ಕಾರಣದಿಂದಾಗಿ ಅಥವಾ ಯಾವುದೇ ರೀತಿಯ ಪರೋಕ್ಷ, ವಿಶೇಷ, ಪ್ರಾಸಂಗಿಕ, ಸಾಂದರ್ಭಿಕ, ದಂಡನೀಯ ಅಥವಾ ಅನುಕರಣೀಯ ಹಾನಿಗಳಿಗೆ ಯಾವುದೇ ರೀತಿಯ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಈ ನಿಯಮಗಳ ಅಡಿಯಲ್ಲಿನ ಒಟ್ಟಾರೆ ಬಾಧ್ಯತೆಯು $500 (ಐದು ನೂರು US ಡಾಲರ್‌ಗಳು) ಗಿಂತಲೂ ಹೆಚ್ಚಾಗುವಂತಿಲ್ಲ. ಕೆಲವು ನ್ಯಾಯಾಂಗ ವ್ಯಾಪ್ತಿಗಳಲ್ಲಿ ಕೆಲವು ಹಾನಿಗಳಿಗೆ ಪ್ರತ್ಯೇಕಿಸುವಿಕೆ ಅಥವಾ ಪರಿಮಿತಿಯನ್ನು ಅನುಮತಿಸುವುದಿಲ್ಲ, ಹಾಗಾಗಿ ಈ ಪ್ರತ್ಯೇಕಿಸುವಿಕೆ ಮತ್ತು ಪರಿಮಿತಿಯು ನಿಮಗೆ ಅನ್ವಯವಾಗದೆ ಇರಬಹುದು.

  6. Mozilla ಈ ನಿಯಮಗಳನ್ನು ಅಗತ್ಯವಿರುವ ರೀತಿಯಲ್ಲಿ ಆಗಿಂದಾಗ್ಗೆ ನವೀಕರಿಸಬಹುದು. ಈ ನಿಯಮಗಳನ್ನು Mozilla ದ ಲಿಖಿತ ಒಪ್ಪಂದವಿಲ್ಲದೆ ಮಾರ್ಪಡಿಸಲು ಅಥವಾ ರದ್ದುಮಾಡಲು ಸಾಧ್ಯವಿಲ್ಲ.

  7. ಈ ನಿಯಮಗಳನ್ನು ಯು.ಎಸ್.ಎ ನ ಕ್ಯಾಲಿಫೋರ್ನಿಯಾ ರಾಜ್ಯದ ನಿಯಮಗಳಿಂದ ಅದರ ಕಾನೂನು ನಿಬಂಧನೆಗಳ ಸಂಘರ್ಷವನ್ನು ಹೊರತುಪಡಿಸಿ ಆಡಳಿತ ನಡೆಸಲಾಗುತ್ತದೆ. ಈ ನಿಯಮಗಳಲ್ಲಿನ ಯಾವುದೇ ಭಾಗವನ್ನು ಅಮಾನ್ಯ ಅಥವಾ ನಿರ್ಬಂಧಿಸಲಾಗದ ರೀತಿಯಲ್ಲಿ ಇರಿಸಿಕೊಂಡರೆ, ಉಳಿದ ಭಾಗಗಳು ಸಂಪೂರ್ಣ ಕಾರ್ಯನಿರತ ಮತ್ತು ಪರಿಣಾಮಕಾರಿಯಾಗಿರುತ್ತದೆ. ಈ ನಿಯಮಗಳ ಅನುವಾದಿತ ಆವೃತ್ತಿಗಳಲ್ಲಿ ಏನಾದರೂ ಸಂಘರ್ಷ ಕಂಡುಬಂದರೆ, ಇಂಗ್ಲಿಷ್‌ನ ಆವೃತ್ತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತದೆ.